ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳು

Organic_Millets_Tourist_Spots_Bangalore

Organic_Millets_Tourist_Spots_Bangalore

Organic_Millets_Tourist_Spots_Bangalore

Organic_Millets_Tourist_Spots_Bangalore

ವಿಧಾನ ಸೌಧ

ರಾಜ್ಯ ಶಾಸಕಾಂಗ ಹಾಗೂ ಸಚಿವಾಲಯದ ಕಛೇರಿಗಳಿರುವ ಈ ಅತ್ಯಾಕರ್ಷಕ ಕಟ್ಟಡ ಬೆಂಗಳೂರು ನಗರದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಒಂದು. ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿರುವ ಈ ಕಟ್ಟಡ ಇಂಡೊ-ಸಾರ್‍ಸೆನಿಕ್ ಹಾಗೂ ದ್ರಾವಿಡಿಯನ್ ವಿನ್ಯಾಸಗಳನ್ನು ಹೊಂದಿದೆ.

ಕಬ್ಬನ್ ಪಾರ್ಕ್

ಕಬ್ಬನ್ ಉದ್ಯಾನವನ 300 ಎಕರೆ ಪ್ರದೇಶದಲ್ಲಿ ಹರಡಿದ್ದು ನಗರಕ್ಕೆ ಹಸಿರು ಹಾಗೂ ಆಮ್ಲಜನಕವನ್ನು ಒದಗಿಸುವ ಮುಖ್ಯವಾದ ಸ್ಥಳವಾಗಿದೆ. ಕೆಂಪು ಕಲ್ಲಿನಿಂದ ನಿರ್ಮಿಸಿರುವ ರಾಜ್ಯ ಗ್ರಂಥಾಲಯ ಕಟ್ಟಡ ಅದ್ಭುತ ಶೈಲಿಯಿಂದ ಕೂಡಿದ್ದು, ಅನೇಕ ಕಾರಂಜಿಗಳು, ಆಕರ್ಷಕ ಹೂವುಗಳು ಹಾಗೂ ತಂಪಾದ ತೋಪುಗಳು ಇಲ್ಲಿವೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ನಗರದಿಂದ 22 ಕಿ.ಮೀ.ಗಳ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರಾಣಿ ಸಂಗ್ರಹಾಲಯ, ಸಫಾರಿ, ಚಿಟ್ಟೆಗಳ ಪಾರ್ಕ್ ಹಾಗೂ ರಕ್ಷಣಾ ಕೇಂದ್ರವನ್ನು (ಸೆರೆಹಿಡಿದಿರುವ ಪ್ರಾಣಿಗಳನ್ನು ರಕ್ಷಿಸುವ ಸ್ಥಳ) ಹೊಂದಿದೆ.

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ, ನಗರದ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಈ ಅರಮನೆಯನ್ನು ಸೆಂಟ್ರಲ್ ಹೈಸ್ಕೂಲ್‍ನ (ಈಗ ಸೆಂಟ್ರಲ್ ಕಾಲೇಜ್) ಮೊದಲ ಪ್ರಾಂಶುಪಾಲರಾದ ರೆವ್. ಗ್ಯಾರೆಟ್ ಅವರು ನಿರ್ಮಿಸಿದರು. ಒಟ್ಟು 455 ಎಕರೆ ಪ್ರದೇಶದಲ್ಲಿ, 45 ಸಾವಿರ ಚ.ಅಡಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಈ ಅರಮನೆ ಇಂಗ್ಲೆಂಡ್‍ನ ವಿಂಡ್ಸರ್ ಕ್ಯಾಸಲ್‍ನ ಸಣ್ಣ ಪ್ರತಿರೂಪದಂತಿದೆ.

Organic_Millets_Tourist_Spots_Bangalore

ಟಿಪು ಸುಲ್ತಾನ್ ಬೇಸಿಗೆ ಅರಮನೆ

ಹೈದರ್ ಆಲಿಯ ಆಳ್ವಿಕೆಯಲ್ಲಿ ಆರಂಭಿಸಿದ ಈ ಅರಮನೆ ನಿರ್ಮಾಣ ಟಿಪ್ಪು ಸುಲ್ತಾನ್‍ನ ಕಾಲದಲ್ಲಿ ಪೂರ್ಣಗೊಂಡಿತು. ಈ ಅರಮನೆಯನ್ನು ಸಂಪೂರ್ಣವಾಗಿ ಟೀಕ್ ಮರದಿಂದ ನಿರ್ಮಿಸಿಲಾಗಿದ್ದು, ಇಂಡೊ-ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಕೂಡಿದೆ.

Organic_Millets_Tourist_Spots_Bangalore

ನಂದಿ ಬೆಟ್ಟ

ಬೆಂಗಳೂರು ನಗರದಿಂದ 65 ಕಿ.ಮೀ.ಗಳ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಸುಂದರವಾದ ಪಿಕ್ನಿಕ್ ತಾಣ. ನೆಲಮಟ್ಟದಿಂದ 1,478 ಅಡಿ ಎತ್ತರದಲ್ಲಿರುವ ಈ ಬೆಟ್ಟ ವಿಶೇಷವಾಗಿ ಬೇಸಿಗೆಯಲ್ಲಿ ಅತ್ಯಂತ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ.

Organic_Millets_Tourist_Spots_Bangalore

ಲಾಲ್‍ಬಾಗ್ ಸಸ್ಯೋದ್ಯಾನ

240 ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ಲಾಲ್‍ಬಾಗ್ ಅತ್ಯಂತ ಅಪರೂಪದ ಸಸ್ಯಗಳಲ್ಲದೆ, ಶತಮಾನಗಳಷ್ಟು ಹಳೆಯದಾದ ಮರಗಳಿರುವ ಭಾರತದ ಅತೀ ದೊಡ್ಡ ಉದ್ಯಾನವನಗಳಲ್ಲಿ ಒಂದಾಗಿದೆ. ಕೆಂಪೇಗೌಡ ವೀಕ್ಷಣಾ ಗೋಪುರ, ಸಸ್ಯ ಗಡಿಯಾರ, ಸಸ್ಯಾಲಂಕಾರದ ಪಾರ್ಕ್, ಮರದಿಂದ ನಿರ್ಮಿಸಿರುವ ಬ್ಯಾಂಡ್‍ಸ್ಟ್ಯಾಂಡ್ ಹಾಗೂ ಲಂಡನ್‍ನ ಕ್ರಿಸ್ಟಲ್ ಪ್ಯಾಲೆಸ್ ಅನ್ನು ಹೋಲುವ ಗಾಜಿನ ಮನೆ (ಗ್ಲಾಸ್ ಹೌಸ್) ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.