ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು

Organic_Millets_Tourist_Spots_Mysuru

Organic_Millets_Tourist_Spots_Mysuru

Organic_Millets_Tourist_Spots_Mysuru

Organic_Millets_Tourist_Spots_Mysuru

Organic_Millets_Tourist_Spots_Mysuru

ಜಗನ್ ಮೋಹನ ಅರಮನೆ

1861ರಲ್ಲಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದಂತಹ ಈ ಕಟ್ಟಡ ಹಿಂದೂ ವಾಸ್ತುಶಿಲ್ಪವನ್ನು ಹೊಂದಿದೆ. 1902ರಲ್ಲಿ ಕೃಷ್ಣರಾಜ ಒಡೆಯರ್ Iಗಿ ಅವರ ಪಟ್ಟಾಭಿಷೇಕ ಇಲ್ಲಿ ಜರುಗಿತು. 1912ರಲ್ಲಿ ಅಂಬಾ ವಿಲಾಸ ಅರಮನೆ ನಿರ್ಮಾಣವಾಗುವವರೆಗೂ ಒಡೆಯರ್ ವಂಶಸ್ಥರು ಈ ಅರಮನೆಯಲ್ಲಿ ವಾಸಿಸುತ್ತಿದ್ದರು.

ಲಲಿತ್ ಮಹಲ್ ಪ್ಯಾಲೆಸ್

ಅಂದಿನ ದಿನಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದಂತಹ ಬಾಂಬೆ ಮೂಲದ ವಾಸ್ತುಶಿಲ್ಪಿ ಇ.ಡಬ್ಲ್ಯೂ. ಫ್ರಿಚ್ಲೆ ಅವರು ವಿನ್ಯಾಸಪಡಿಸಿದಂತಹ ಈ ಕಟ್ಟಡವನ್ನು 1931ರಲ್ಲಿ ರೂ. 13 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಯಿತು. ಮಹಾರಾಜ ಕೃಷ್ಣರಾಜ ಒಡೆಯರ್ Iಗಿ ಅವರ ಆಳ್ವಿಕೆಯಲ್ಲಿ ಯೂರೋಪ್‍ನಿಂದ ಆಗಮಿಸುವಂತಹ ಅತಿಥಿಗಳು ಉಳಿದುಕೊಳ್ಳಲು ಅತಿಥಿ ಗೃಹವಾಗಿ ಈ ಕಟ್ಟಡವನ್ನು ನಿರ್ಮಿಸಲಾಯಿತು.

ಬೃಂದಾವನ ಉದ್ಯಾನವನ

ಇದು ಕೃಷ್ಣರಾಜಸಾಗರ ಜಲಾಶಯದ ಬಳಿಯಿರುವ ಅತ್ಯಂತ ಸುಂದರವಾದ ಉದ್ಯಾನವನವಾಗಿದೆ. ಮೈಸೂರಿನಿಂದ 19 ಕಿ.ಮೀ.ಗಳ ದೂರದಲ್ಲಿರುವ ಈ ಉದ್ಯಾನವನ 150 ಎಕರೆ ಪ್ರದೇಶದಲ್ಲಿ ಹರಡಿದ್ದು, ಭಾರತದಲ್ಲಿ ಅತ್ಯುತ್ತಮ ಉದ್ಯಾನವನಗಳಲ್ಲಿ ಒಂದು ಎಂದೇ ಗುರುತಿಸಲಾಗುತ್ತದೆ.

ಶ್ರೀರಂಗಪಟ್ಟಣ

ಇದು ಸಾಂಸ್ಕøತಿಕ ಹಾಗೂ ಚಾರಿತ್ರಿಕ ಹಿನ್ನೆಲೆಯುಳ್ಳ ದ್ವೀಪ. ಮೈಸೂರು ನಗರದಿಂದ 14 ಕಿ.ಮೀ.ಗಳು ಹಾಗೂ ಬೆಂಗಳೂರಿನಿಂದ 125 ಕಿ.ಮೀ.ಗಳ ದೂರದಲ್ಲಿದೆ. ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯ ತೀರ 3 ಕಿ.ಮೀ.ಗಳ ಉದ್ದ ಹಾಗೂ ಒಂದು ಕಿ.ಮೀ. ಅಗಲವಿದೆ.

ರಂಗನತಿಟ್ಟು

ರಂಗನತಿಟ್ಟು ಪಕ್ಷಿಧಾಮ ಶ್ರೀರಂಗಪಟ್ಟಣದಿಂದ 4 ಕಿ.ಮೀ. ಹಾಗೂ ಮೈಸೂರಿನಿಂದ 19 ಕಿ.ಮೀ.ಗಳ ದೂರದಲ್ಲಿದೆ. ಇದು ಕಾವೇರಿ ನದಿ ತೀರದಲ್ಲಿರುವ ದ್ವೀಪವಾಗಿದ್ದು, 40 ಎಕರೆಗಳಿವೆ. ಸಾವಿರಾರು ಅಪರೂಪದ ಪಕ್ಷಿಗಳ ತಳಿ ಸಂವರ್ಧನೆ ಹಾಗೂ ವಾಸಸ್ಥಾನವಾಗಿದೆ.

Organic_Millets_Tourist_Spots_Bangalore

ಚಾಮುಂಡಿ ಬೆಟ್ಟ

ಚಾಮುಂಡಿ ಬೆಟ್ಟ ಮೈಸೂರಿನ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ 3,489 ಅಡಿಗಳ ಎತ್ತರದಲ್ಲಿರುವ ಈ ಬೆಟ್ಟದಲ್ಲಿ ನಾಡಿನ ಅದಿದೇವತೆ ಚಾಮುಂಡಿ ನೆಲೆಸಿದ್ದಾಳೆ.

Organic_Millets_Tourist_Spots_Bangalore

ಮೈಸೂರು ಮೃಗಾಲಯ

ಶ್ರೀ ಚಾಮರಾಜೇಂದ್ರ ಮೃಗಾಲಯ ಎಂದೂ ಕರೆಯಲ್ಪಡುವ ಈ ಮೃಗಾಲಯ ಭಾರತದ ಅತ್ಯಂತ ಹಳೆಯ ಮೃಗಾಲಯವೆನಿಸಿದೆ. ಅನೇಕ ವನ್ಯಮೃಗಗಳು ಹಾಗೂ ಅಪರೂಪದ ಪ್ರಾಣಿ ಪಕ್ಷಿಗಳ ಸಂಗ್ರಹವಿದ್ದು, ಪ್ರತಿ ದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಅಂಬಾ ವಿಲಾಸ ಅರಮನೆ

1912ರಲ್ಲಿ, ರೂ. 41.50 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಇಂಡೊ-ಸಾರ್‍ಸೆನಿಕ್ ಶೈಲಿಯ ಅರಮನೆ ನೋಡಲು ಅತ್ಯಂತ ನಯನಮನೋಹರ. ಈ ಅರಮನೆಯ ಗುಮ್ಮಟಗಳು, ದರ್ಬಾರ್ ಹಾಲ್, ಒಳಾಂಗಣದಲ್ಲಿರುವ ಹೊಯ್ಸಳ ಶೈಲಿಯ ಶಿಲ್ಪಗಳು ಹಾಗೂ ತೈಲಚಿತ್ರಗಳ ಸಂಗ್ರಹ ಅತ್ಯಂತ ಆಕರ್ಷಕವಾಗಿವೆ. ಪ್ರತಿ ಭಾನುವಾರ ಹಾಗೂ ಪ್ರಮುಖ ರಜಾ ದಿನಗಳಂದು ಅರಮನೆ ಸಾವಿರಾರು ದೀಪಗಳಿಂದ ಜಗಮಗಿಸುತ್ತದೆ.

Organic_Millets_Tourist_Spots_Bangalore