Millets - The Super Food

ಸಿರಿಧಾನ್ಯಗಳು – ಉತ್ಕøಷ್ಟ ಆಹಾರ

ಸಿರಿಧಾನ್ಯಗಳು ಸಣ್ಣ-ಬೀಜ ರೂಪದ ಧಾನ್ಯಗಳಾಗಿದ್ದು, ಇವು ಭಾರತ ಹಾಗೂ ಆಫ್ರಿಕಾ ರಾಷ್ಟ್ರಗಳ ದೇಶೀ ಬೆಳೆಗಳಾಗಿವೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಅನಾದಿ ಕಾಲದಿಂದಲೂ ಬೆಳೆಯಲಾಗುತ್ತಿದೆ. ಭಾರತದಲ್ಲಿ ಸಿರಿಧಾನ್ಯಗಳನ್ನು 30 ದಶಲಕ್ಷ ಎಕರೆ ಭೂಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಅಂಶವೇ ಜನರಿಗೆ ಈ ಬೆಳೆಗಳ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಭತ್ತಕ್ಕೆ ಹೋಲಿಸಿದರೆ ಸಿರಿಧಾನ್ಯಗಳನ್ನು ಬೆಳೆಸಲು ಶೇ.70%ರಷ್ಟು ಕಡಿಮೆ ನೀರಿನ ಅಗತ್ಯವಿದೆ. ಜೊತೆಗೆ ಇವುಗಳಿಗೆ ಕೀಟನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳ ಅವಶ್ಯಕತೆಯಿಲ್ಲ. ಹಾಗಾಗಿ ಇವು ಸಂಪೂರ್ಣವಾಗಿ ಸಾವಯವ ಹಾಗೂ ಪರಿಸರ-ಸ್ನೇಹಿ. ಮೇಲಾಗಿ ಇವು ಬಹಳ ಕಡಿಮೆ ಉತ್ಪಾದನಾ ವೆಚ್ಚದ ಬೆಳೆಗಳಾಗಿದ್ದು ಉತ್ತಮ ಇಳುವರಿ ನೀಡುತ್ತದೆ ಹಾಗೂ ಕಡಿಮೆ ಫಲವತ್ತತೆಯ ಭೂಮಿಯಲ್ಲಿಯೂ ಸಹ ಬೆಳೆಯಬಲ್ಲವು.

ಸಿರಿಧಾನ್ಯಗಳು ಅತೀ ಹೆಚ್ಚಿನ ಪ್ರಮಾಣದ ಪ್ರೊಟೀನುಗಳು, ನಾರಿನಂಶ, “ಬಿ” ಕಾಂಪ್ಲೆಕ್ಸ್ ವಿಟಮಿನ್‍ಗಳು, ಅಗತ್ಯ ಅಮೈನೊ ಆ್ಯಸಿಡ್‍ಗಳು, ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ “ಇ” ಅಂಶಗಳಿಂದ ಕೂಡಿದ್ದು ಹೆಚ್ಚು ಪೌಷ್ಟಿಕವಾಗಿವೆ. ಸಿರಿಧಾನ್ಯಗಳಲ್ಲಿ ಕಬ್ಬಿಣಾಂಶ, ಮೆಗ್ನೀಸಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಸಿಯಂ ಹಾಗೂ ಪೊಟ್ಯಾಸಿಯಂ ಅಂಶಗಳು ಹೇರಳವಾಗಿರುತ್ತವೆ. ಸಿರಿಧಾನ್ಯಗಳ ಆಹಾರ ಸೇವನೆಯಿಂದ ದೇಹಕ್ಕೆ ದೊರೆಯುವ ಪೌಷ್ಟಿಕಾಂಶಗಳು ಹಾಗೂ ಆರೋಗ್ಯದ ಲಾಭಗಳನ್ನು ಗಮನಿಸಿ ವಿವಿಧ ಸಿರಿಧಾನ್ಯಗಳ ಬೇಡಿಕೆ ಮಾರುಕಟ್ಟೆಯಲ್ಲಿ ತೀವ್ರಗತಿಯಲ್ಲಿ ಏರುತ್ತಿದೆ.

ಸಿರಿಧಾನ್ಯಗಳ ಸೇವನೆಯಿಂದ ದೊರಕುವ ಆರೋಗ್ಯ ಲಾಭಗಳು

  • ಹೆಚ್ಚಿನ ನಾರಿನಾಂಶ ಹಸಿವನ್ನು ನೀಗಿಸುತ್ತದೆ ಹಾಗೂ ಬೊಜ್ಜನ್ನು ಕಡಿಮೆಗೊಳಿಸುತ್ತದೆ.
  • ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ.
  • ಪಿತ್ತಗಲ್ಲು (gallstones) ಹಾಗೂ ಹೊಟ್ಟೆಯ ಹುಣ್ಣುಗಳನ್ನು ತಡೆಗಟ್ಟುವಲ್ಲಿ ಹಾಗೂ ಅವುಗಳ ಅದರ ಚಿಕಿತ್ಸೆಗೆ ಲಾಭಕಾರಿ.
  • ರಕ್ತಹೀನತೆ, ಪಿತ್ತಜನಕಾಂಗದ ತೊಂದರೆ ಹಾಗೂ ಅಸ್ತಮಾ ಕಾಯಿಲೆಯನ್ನು ಕಡಿಮೆಗೊಳಿಸುತ್ತದೆ.
  • ಇದರ ಹೈಪೊ ಅಲೆರ್ಜಿಕ್ ಗುಣಗಳು ಅಲರ್ಜಿಯನ್ನು ತಡೆಗಟ್ಟಬಲ್ಲದು.
  • ರಕ್ತದ ಗ್ಲೂಕೋಸ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆಗೊಳಿಸುತ್ತದೆ.
  • ಇದರÀ ಆ್ಯಂಟಿ-ಆಕ್ಸಿಡೆಂಟ್‍ಗಳು ಉತ್ಕರ್ಷಣ ಒತ್ತಡವನ್ನು (oxidative stress) ಕಡಿಮೆಗೊಳಿಸುತ್ತದೆ.
  • ಕ್ಯಾನ್ಸರ್ ಸಂಭವವನ್ನು ಕಡಿಮೆಗೊಳಿಸುತ್ತದೆ.
  • ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.