ಸಾವಯವ & ಸಿರಿಧಾನ್ಯಗಳು 2017- ರಾಷ್ಟ್ರೀಯ ವಾಣಿಜ್ಯ ಮೇಳ

ಪ್ರಪಂಚದೆಲ್ಲೆಡೆ ಜನರಲ್ಲಿ ಆರೋಗ್ಯ ಹಾಗೂ ದೃಢಕಾಯತೆಯ ಅರಿವು ಹೆಚ್ಚಾಗುತ್ತಿದ್ದು, ಇದರಿಂದಾಗಿ ಜನರ ಆಹಾರ ಸೇವನಾ ಅಭ್ಯಾಸಗಳೂ ಸಹ ತೀವ್ರ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.

“ರಾಷ್ಟ್ರೀಯ ಸಾವಯವ ವಾಣಿಜ್ಯ ಮೇಳ - ಸಾವಯವ & ಸಿರಿಧಾನ್ಯಗಳು 2017” ರಾಷ್ಟ್ರ ಮಟ್ಟದ ಸಮಾವೇಶವಾಗಿದ್ದು, ಕೃಷಿ, ತೋಟಗಾರಿಕೆ, ಸಂಸ್ಕರಣೆ ಹಾಗೂ ಮಾರಾಟ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ.

ಕರ್ನಾಟಕ ರಾಜ್ಯವು ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಮೂಂಚೂಣಿ ರಾಜ್ಯವಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿ ಲಭ್ಯವಿರುವ ಅಪಾರ ಅವಕಾಶಗಳ ಉಪಯೋಗ ಪಡೆದುಕೊಳ್ಳಲು ತಮ್ಮನ್ನು ಆಹ್ವಾನಿಸುತಿದ್ದೇವೆ.


ಒಂದೆಡೆ ಬೆಳೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿರುವ ಕಾರಣದಿಂದಾಗಿ ಜಾಗತಿಕ ಪರಿಸರ ಹಾಗೂ ಮಣ್ಣಿನ ಆರೋಗ್ಯ ಕೆಡುತ್ತಿದ್ದು, ಇದು ಜನರಲ್ಲಿ ಆತಂಕ ಉಂಟು ಮಾಡಿದ್ದರೆ, ಮತ್ತೊಂದೆಡೆ ಯಾವುದೇ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿರದೇ ಜಗತ್ತಿನೆಲ್ಲೆಡೆ ಹೆಚ್ಚಾಗುತ್ತಿರುವ ಜೀವನಶೈಲಿ ಕಾಯಿಲೆಗಳು ಎಚ್ಚರಿಕೆಯ ಘಂಟೆ ಬಾರಿಸಿವೆ.

ಇದರ ಪರಿಣಾಮವಾಗಿ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಸಹ ಜನರ ಆಹಾರ ಸೇವನಾ ಕ್ರಮಗಳಲ್ಲಿ ತೀವ್ರ ಬದಲಾವಣೆಯಾಗುತ್ತಿದೆ. ಜೊತೆಯಲ್ಲಿ ಆರೋಗ್ಯ ಮತ್ತು ಪರಿಸರದ ಬಗೆಗಿನ ಅರಿವೂ ಕೂಡ ಹೆಚ್ಚಾಗುತ್ತಿದೆ. ಈ ಬದಲಾವಣೆ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ಮಾಡಿದೆ ಹಾಗೂ ಜನರಲ್ಲಿ ಸಿರಿಧಾನ್ಯಗಳ ಸೇವನೆಯನ್ನು ಕುರಿತಂತೆ ಆಸಕ್ತಿಯನ್ನು ಬೆಳೆಸುತ್ತಿದೆ.

ಭಾರತದಲ್ಲಿ ಅಂದಾಜು 6 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಲವಾರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳಿಗೆ ಭಾರತವೇ ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಆಂತರಿಕ ಬಳಕೆಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ವಿಶ್ವಪಟದಲ್ಲಿ ಭಾರತವು ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳನ್ನು ಸರಬರಾಜು ಮಾಡುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇತ್ತೀಚಿನ ದಿನಗಳಲ್ಲಿ, ಸಣ್ಣ-ಬೀಜಗಳ ಗುಂಪಿಗೆ (highly variable small-seeded gras) ಸೇರಿದ ಸಿರಿಧಾನ್ಯಗಳನ್ನು “ಅತ್ಯುತ್ಕøಷ್ಟ ಆಹಾರ” (super food) ಎಂದೇ ಪರಿಣಗಸಲ್ಪಡಲಾಗಿದೆ. ಈ ಗ್ಲುಟೆನ್‍ಮುಕ್ತ (ಗೋಧಿ ಜಿಗುಟು) ಧಾನ್ಯಗಳು ಅತೀ ಹೆಚ್ಚು ನಾರು, ಕ್ಯಾಲ್ಸಿಯಂ, ಪ್ರೋಟೀನುಗಳು ಹಾಗೂ ಖನಿಜಾಂಶಗಳನ್ನು ಹೊಂದಿವೆ.

“ರಾಷ್ಟ್ರೀಯ ವಾಣಿಜ್ಯ ಮೇಳ-ಸಾವಯವ & ಸಿರಿಧಾನ್ಯಗಳು 2017” ರಾಷ್ಟ್ರಮಟ್ಟದ ಸಮಾವೇಶವಾಗಿದ್ದು, ಕೃಷಿ, ತೋಟಗಾರಿಕೆ, ಸಂಸ್ಕರಣೆ ಹಾಗೂ ಮಾರಾಟ ಕ್ಷೇತ್ರದಲ್ಲಿ ಬೃಹತ್ ಅವಕಾಶಗಳನ್ನು ಕಲ್ಪಿಸುವ ಅತ್ಯುತ್ತಮ ವೇದಿಕೆಯಾಗಿದೆ. ಈ ಮೇಳ ಸಾವಯವ ಕೃಷಿಕರು, ರೈತರ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಖರೀದಿದಾರರು, ರಫ್ತುದಾರರು, ಮೌಲ್ಯಾಧಾರಿತ ಸಾವಯವ ಉತ್ಪನ್ನಗಳ ತಯಾರಕರು, ಹೋಟೆಲ್ ಉದ್ಯಮಿಗಳು, ಕೃಷಿ ಉಪಕರಣಗಳ ತಯಾರಕರು ಹಾಗೂ ಇತರರಿಗೆ ತಮ್ಮ ಉತ್ಪನ್ನಗಳನ್ನು ಹಾಗೂ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿನ ತಮ್ಮ ಪರಿಣಿತಿಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಮೇಳವು ಎಲ್ಲ ಸಾವಯವ ಭಾಗೀದಾರರಿಗೆ ಸಾವಯವ ಕೃಷಿಯ ವ್ಯಾಪಾರ ವಹಿವಾಟು ಕುರಿತು ಮಾಹಿತಿ ಹಾಗೂ ಜ್ಞಾನ ವಿನಿಮಯವನ್ನು ಪ್ರೋತ್ಸಾಹಿಸುವ ಪ್ರಮುಖ ವೇದಿಕೆಯಾಗಲಿದೆ. ಜೊತೆಗೆ, ಉತ್ಪಾದಕರು ಹಾಗೂ ಮಾರಾಟಗಾರರ ನಡುವಿನ ಅಂತರವನ್ನು ಕಡಿಮೆ ಮಾಡಿ ನೇರ ಸಂಪರ್ಕ ಕಲ್ಪಿಸುವತ್ತ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ರೈತರು ಸಂಘಟಿತರಾಗಿ 14 ಪ್ರಾಂತೀಯ ಒಕ್ಕೂಟಗಳನ್ನು ರಚಿಸಿಕೊಂಡಿರುತ್ತಾರೆ. ಅವರುಗಳು ವೈವಿಧ್ಯಮಯ ಸಾವಯವ ಉತ್ಪನ್ನಗಳನ್ನು ಮತ್ತು ಸಿರಿಧಾನ್ಯಗಳನ್ನು ಉತ್ಪಾದಿಸುತ್ತಿದ್ದಾರೆ. ಈ ವಾಣಿಜ್ಯ ಮೇಳವು ರೈತರ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಸುಲಭ ಮತ್ತು ಉತ್ತಮ ವೇದಿಕೆಯಾಗಿದೆ. ಸಾವಯವ ಮತ್ತು ಸಿರಿಧಾನ್ಯಗಳ ಅಗತ್ಯಗಳಿಗೆ ಇದು ಅತ್ಯುತ್ತಮ ಅವಕಾಶ ಕಲ್ಪಿಸುತ್ತದೆ.

ಈ ವಿಶೇಷ ರಾಷ್ಟ್ರೀಯ ಮೇಳವನ್ನು ಕೃಷಿ ಇಲಾಖೆ, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (KAPPEC), ಕೃಷಿ ವಿಶ್ವವಿದ್ಯಾಲಯಗಳು, ಹಾಗೂ ಜೈವಿಕ್ ಕೃಷಿಕ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ. ಇಂಟರ್‍ನ್ಯಾಶನಲ್ ಕಾಂಪಿಟೆನ್ಸ್ ಸೆಂಟರ್ ಫಾರ್ ಆಗ್ರ್ಯಾನಿಕ್ ಅಗ್ರಿಕಲ್ಚರ್ (ICCOA) ಈ ಮೇಳದ ಪರಿಣಾಮಕಾರಿ ಪ್ರದರ್ಶನಕ್ಕಾಗಿ e್ಞÁನ ಪಾಲುದಾರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಹವಾನಿಯಂತ್ರಿತ ಮೇಳ ಆಯೋಜನೆಯ ಆವರಣವನ್ನು 200ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ವಿನ್ಯಾಸಪಡಿಸಲಾಗಿದೆ.

Organics_Millets_01

Organics_Millets_01

Organics_Millets_01

Organics_Millets_01

ಮೇಳದಲ್ಲಿ ನಡೆಯುವ ಕಾರ್ಯಕ್ರಮಗಳು

ವಸ್ತು ಪ್ರದರ್ಶನ

ವಿವಿಧ ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು ಹಾಗೂ ಪರಿಸರ-ಸ್ನೇಹಿ ಉತ್ಪನ್ನಗಳ ಪ್ರದರ್ಶನ.

ಉತ್ಪಾದಕರು ಮತ್ತು ಮಾರುಕಟ್ಟೆದಾರರ ಮುಖಾಮುಖಿ ಭೇಟಿ (B2B).

ಉತ್ಪಾದಕರು ಮತ್ತು ಮಾರುಕಟ್ಟೆದಾರರ ಭೇಟಿ ಹಾಗೂ ಮಾರುಕಟ್ಟೆ/ ಚರ್ಚೆಗಾಗಿ ಪ್ರದರ್ಶನ ಸ್ಥಳದಲ್ಲಿ ಪ್ರತ್ಯೇಕ ಆವರಣವನ್ನು ನಿರ್ಮಿಸಿದೆ. ಉತ್ಪಾದಕರು ಹಾಗೂ ಮಾರಾಟಗಾರರ ಅಗತ್ಯಗಳು ಮತ್ತು ಬೇಡಿಕೆಗಳನ್ನು ಸರಿಹೊಂದಿಸಿದ ನಂತರ ಭೇಟಿಗೆ ಏರ್ಪಾಟು ಮಾಡಲಾಗುತ್ತದೆ.

ರಾಷ್ಟ್ರೀಯ ಸಮ್ಮೇಳನ

ಜ್ಞಾನ ಹಾಗೂ ಹೊಸ ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿದ್ದು, ಮಾರುಕಟ್ಟೆ, ಮೌಲ್ಯವರ್ಧನೆ ಹಾಗೂ ಸಂಸ್ಕರಣೆಯ ಜೊತೆಗೆ ಸಿರಿಧಾನ್ಯಗಳಿಗಾಗಿಯೇ ವಿಶೇಷ ಅಧಿವೇಶನ ಏರ್ಪಡಿಸಲಾಗಿದೆ.

ರೈತರ ಕಾರ್ಯಾಗಾರ

ಉತ್ಪಾದನೆ, ದೃಢೀಕರಣ, ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ ಎರಡು ದಿನಗಳ ರೈತರ ಕಾರ್ಯಾಗಾರ ಏರ್ಪಡಿಸಲಾಗಿದೆ.

ಗ್ರಾಹಕರ ಸಂಪರ್ಕ ಕಾರ್ಯಕ್ರಮ

ಸಾವಯವ ಉತ್ಪನ್ನಗಳು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಲು, ಸಾವಯವ ಆಹಾರದ ಬಗ್ಗೆ ಅರಿವನ್ನು ಮೂಡಿಸಲು ಹಾಗೂ ಆಹಾರ ಸುರಕ್ಷತೆ, ಆರೋಗ್ಯ ಹಾಗೂ ಪರಿಸರದ ಸಂರಕ್ಷಣೆಗೆ ಸಾವಯವ ಹಾಗೂ ಸಿರಿಧಾನ್ಯಗಳಿಂದಾಗುವ ಲಾಭಗಳ ಬಗ್ಗೆ ತಿಳುವಳಿಕೆ ನೀಡಲು ಈ ಕಾರ್ಯಕ್ರಮ ನೆರವಾಗುತ್ತದೆ.
ಸಮಾಜದ ವಿವಿಧ ವರ್ಗಗಳಾದ ಗೃಹಿಣಿಯರು, ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಇತರರನ್ನು ಆಕರ್ಷಿಸಲು ಈ ಮೇಳವನ್ನು ಆಯೋಜಿಸಲಾಗಿದೆ. ಗೃಹಿಣಿಯರಿಗೆ ಸಿರಿಧಾನ್ಯಗಳನ್ನು ಬಳಸಿ ವಿಶೇಷ ಅಡುಗೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಮೇಳದ ಎರಡನೆಯ ಹಾಗೂ ಮೂರನೆಯ ದಿನದಂದು ಸಾರ್ವಜನಿಕರಿಗಾಗಿ ಪೌಷ್ಟಿಕಾಂಶ ತಜ್ಞರುಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾವಯವ ಆಹಾರ ಮಳಿಗೆ

ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳಿಂದ ತಯಾರಿಸಲಾದಂತಹ ರುಚಿಕರ ತಿಂಡಿ-ತಿನಿಸುಗಳು ಈ ಮಳಿಗೆಗಳಲ್ಲಿ ದೊರೆಯುತ್ತದೆ. ಇಲ್ಲಿ ಜನರಿಗೆ ಸಾವಯವ ಆಹಾರ ತಯಾರಿಕೆಯ ಮಹತ್ವದ ಬಗ್ಗೆ ತಿಳುವಳಿಕೆ ನೀಡುವುದು ಮಾತ್ರವಲ್ಲದೇ, ಅವರಿಗೆ ರುಚಿಕರವಾದ ಆಹಾರ ಸೇವಿಸುವ ಅವಕಾಶ ಕಲ್ಪಿಸಿ ಅವರು ತಮ್ಮ ಆಹಾರ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಲು ನೆರವು ನೀಡಲಾಗುವುದು.