Organic farming and its potential

ಸಾವಯವ ಕೃಷಿ ಹಾಗೂ ಸಾಮಥ್ರ್ಯ

ಸಾವಯವ ಕೃಷಿಯು ರಾಸಾಯನಿಕರಹಿತ, ಗುಣಮಟ್ಟದ ಹಾಗೂ ಸುರಕ್ಷಿತ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸಾವಯವ ಕೃಷಿಯು ಮಣ್ಣಿನ ಫಲವತ್ತತೆಯನ್ನು ಪುನಃಸ್ಥಾಪಿಸುವ ಹಾಗೂ ಉಳಿಸಿಕೊಳ್ಳುವ ಪರಿಸರ-ಸ್ನೇಹಿ ಉತ್ಪಾದನಾ ವಿಧಾನಗಳು ಹಾಗೂ ಕೃಷಿ ಪದ್ಧತಿಗಳನ್ನು ಅನುಸರಿಸುತ್ತದೆ. ಆಹಾರ ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯನ್ನು ಸಾಧಿಸುವ ಅಂಶಗಳನ್ನು ಒಳಗೊಂಡಿರುವುದರಿಂದಾಗಿ ಈ ಕೃಷಿ ಪದ್ಧತಿಯು ಜಗತ್ತಿನಾದ್ಯಂತ ಬಹಳ ವೇಗವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಜಾಗತಿಕ ಚಿತ್ರಣ (Global Scenario)

ವಿಶ್ವದಾದ್ಯಂತ 172 ರಾಷ್ಟ್ರಗಳಲ್ಲಿ 2 ದಶಲಕ್ಷ ಸಾವಯವ ಕೃಷಿ ಉತ್ಪಾದಕರಿದ್ದು, ಒಟ್ಟು 43.70 ದಶಲಕ್ಷ ಹೆಕ್ಟೇರ್ ಭೂಮಿ (ಒಟ್ಟು ಕೃಷಿ ಭೂಮಿಯ 1%ರಷ್ಟು ಪ್ರದೇಶ) ಸಾವಯವ ಕೃಷಿ ನಿರ್ವಹಣೆಯಲ್ಲಿದೆ. ಅಲ್ಲದೆ, ಕಳೆದ 14 ವರ್ಷಗಳಲ್ಲಿ ಪ್ರತಿ ವರ್ಷ ಸಾವಯವ ಸಾಗುವಳಿ ಪ್ರದೇಶದ ವ್ಯಾಪ್ತಿ ಹಾಗೂ ಜಾಗತಿಕ ಮಟ್ಟದಲ್ಲಿ ಸಾವಯವ ಆಹಾರ ಮಾರುಕಟ್ಟೆ ಕ್ರಮವಾಗಿ 10% ರಿಂದ 12% ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 2018ರ ವೇಳೆಗೆ ಸಾವಯವ ಉತ್ಪನ್ನಗಳ ಜಾಗತಿಕ ಮಾರುಕಟ್ಟೆ ಸುಮಾರು 80 ಬಿಲಿಯನ್ ಯುಎಸ್ ಡಾಲರ್‍ಗಳನ್ನು ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

ಭಾರತದ ಚಿತ್ರಣ (Indian Scenario)

ಮಾರ್ಚ್ 2016ಕ್ಕೆ ಅಂತ್ಯಗೊಂಡಂತೆ ಭಾರತ ಒಟ್ಟು 57.09 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಸಾವಯವ ಕೃಷಿ ಪದ್ಧತಿಗೆ ಒಳಪಡಿಸಿದೆ. ಕಳೆದ ಸಾಲಿನಲ್ಲಿ ದೇಶದಿಂದ ಒಟ್ಟು ರೂ. 1,900 ಕೋಟಿಗಳಷ್ಟು ಮೌಲ್ಯದ 2.64 ಲಕ್ಷ ಟನ್‍ಗಳಷ್ಟು ವಿವಿಧ ಸಾವಯವ ಉತ್ಪನ್ನಗಳನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಇದು ವಿಶ್ವದ ಒಟ್ಟು ಸಾವಯವ ವಹಿವಾಟಿನಲ್ಲಿ 0.3% ರಷ್ಟಾಗುತ್ತದೆ.

ಕರ್ನಾಟಕದ ಚಿತ್ರಣ (Karnataka Scenario)

ಮಾರ್ಚ್ 2016ಕ್ಕೆ ಅಂತ್ಯಗೊಂಡಂತೆ ಕರ್ನಾಟಕದಲ್ಲಿ ಪ್ರಮಾಣೀಕೃತ ಸಾವಯವ ಕೃಷಿಯ ಒಟ್ಟು ಸಾಗುವಳಿ ಪ್ರದೇಶ 93,963 ಹೆಕ್ಟೇರ್‍ನಷ್ಟಿದ್ದು, ರಾಷ್ಟ್ರದಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ, ರಾಜ್ಯದಲ್ಲಿ ಒಟ್ಟು 2,82,633 ಟನ್‍ಗಳಷ್ಟು ಸಾವಯವ ಉತ್ಪನ್ನಗಳ ಉತ್ಪಾದನೆಯಾಗಿದ್ದು, ರಾಜ್ಯವು ದೇಶದಲ್ಲಿ ಸಾವಯವ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುತ್ತದೆ. ರಾಜ್ಯದ ವೈವಿಧ್ಯಮಯ ವಾತಾವರಣ ಹಾಗೂ ಉತ್ಪಾದನಾ ಕ್ರಮಗಳಿಂದಾಗಿ ಸದರಿ ಅಂಕಿ-ಅಂಶಗಳು ರಾಜ್ಯದಲ್ಲಿ ಲಭ್ಯವಿರುವ ವಿಪುಲ ಅವಕಾಶಗಳ ಸಂಕೇತವಾಗಿದೆ. ರಾಜ್ಯದಿಂದ ರಫ್ತು ಮಾಡಲಾಗುತ್ತಿರುವ ಪ್ರಮುಖ ಸಾವಯವ ಪದಾರ್ಥಗಳೆಂದರೆ ಸಕ್ಕರೆ, ಮಾವಿನ ತಿರುಳು, ಗೋಡಂಬಿ, ಪೈನಾಪಲ್ ಜ್ಯೂಸ್, ಇತ್ಯಾದಿ. ಸಾವಯವ ಕೃಷಿಯಡಿ ಅತೀ ಹೆಚ್ಚಿನ ರಫ್ತು ಸಾಮಥ್ರ್ಯ ಹೊಂದಿರುವ ಹಾಗೂ ಮಹತ್ವವನ್ನು ನೀಡಬಹುದಾದ ಇತರೆ ಬೆಳೆಗಳೆಂದರೆ ಕಾಫಿ, ಮಸಾಲೆ ಪದಾರ್ಥಗಳು, ದ್ವಿದಳಧಾನ್ಯಗಳು, ಔಷಧ ಹಾಗೂ ಸುಗಂಧ ಸಸ್ಯಗಳು. ಇದರ ಜೊತೆಗೆ, ಹಣ್ಣುಗಳು ಹಾಗೂ ಹಣ್ಣಿನ ಉತ್ಪನ್ನಗಳಿಗೂ ಸಹ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಲಿದೆ.

Karnataka - Pioneer in Organic Agriculture

ಕರ್ನಾಟಕ – ಸಾವಯವ ಕೃಷಿಯ ಮುಂಚೂಣಿ ರಾಜ್ಯ

  • 2004ರಲ್ಲಿಯೇ ಸಾವಯವ ಕೃಷಿ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
  • ಹಲವಾರು ಉತ್ತೇಜನಾ ಕಾರ್ಯಕ್ರಮಗಳ ಅನುಷ್ಠಾನದ ಫಲವಾಗಿ ಅಂದಾಜು ಒಂದು ಲಕ್ಷ ಹೆಕ್ಟೇರ್ ಭೂಮಿ ಸಾವಯವ ಕೃಷಿಯಲ್ಲಿದೆ.
  • ಹಲವಾರು ಉತ್ತೇಜನಾ ಕಾರ್ಯಕ್ರಮಗಳ ಅನುಷ್ಠಾನದ ಫಲವಾಗಿ ಅಂದಾಜು ಒಂದು ಲಕ್ಷ ಹೆಕ್ಟೇರ್ ಭೂಮಿ ಸಾವಯವ ಕೃಷಿಯಲ್ಲಿದೆ.
  • ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿಯೂ ಸಾವಯವ ಕೃಷಿ ಸಂಶೋಧನಾ ಸಂಸ್ಥೆಗಳ ಸ್ಥಾಪನೆ.
  • ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಒತ್ತು ನೀಡಲು 14 ಪ್ರಾಂತೀಯ ರೈತ ಒಕ್ಕೂಟಗಳ ಸ್ಥಾಪನೆ.
  • ಸಾವಯವ ದೃಢೀಕರಣದ ಅಗತ್ಯಗಳನ್ನು ಪೂರೈಸಲು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆಯ ಸ್ಥಾಪನೆ.
  • ಎಲ್ಲಾ ಭಾಗೀದಾರರನ್ನು ಒಳಗೊಂಡ ಸಾವಯವ ಕೃಷಿ ಡೈರಕ್ಟರಿ ಅಭಿವೃದ್ಧಿ.
  • ರಾಜ್ಯದ ಸಾವಯವ ಉತ್ಪನ್ನಗಳಿಗೆ ದೊಡ್ಡ ಸಂಖ್ಯೆಯ ಗ್ರಾಹಕ ಭಂಡಾರ.
  • 160ಕ್ಕೂ ಹೆಚ್ಚಿನ ಸಂಖ್ಯೆಯ ಸಾವಯವ ಮಳಿಗೆಗಳು, 400ಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಪೊರೇಟ್ ಚಿಲ್ಲರೆ ಮಾರಾಟ ಮಳಿಗೆಗಳು ಹಾಗೂ 8-9 ಸಾವಯವ ರೆಸ್ಟೋರೆಂಟ್‍ಗಳೊಂದಿಗೆ ಬೆಂಗಳೂರು, ಭಾರತದ ಸಾವಯವ ಕೇಂದ್ರಸ್ಥಾನವಾಗಿದೆ.