Promotional Programmes

ರಾಜ್ಯದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳು

ಸಾವಯವ ಭಾಗ್ಯ ಯೋಜನೆ:

ಸರ್ಕಾರದ ಮಹಾತ್ವಾಂಕಾಂಕ್ಷಿ ಯೋಜನೆಯಾದ “ಸಾವಯವ ಭಾಗ್ಯ” ಯೋಜನೆಯನ್ನು 2013-14 ನೇ ಸಾಲಿನಿಂದ ಹೋಬಳಿ ಮಟ್ಟದಲ್ಲಿ ಇ-ಟೆಂಡರ್ ಮುಖಾಂತರ ಪಾರದರ್ಶಕವಾಗಿ ಆಯ್ಕೆ ಮಾಡಲಾದ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತ್ತಿದೆ. ಆಯ್ಕೆಯಾದ ಸರ್ಕಾರೇತರ ಸಂಸ್ಥೆಗಳಿಗೆ ಪ್ರತಿ ಹೋಬಳಿಯಲ್ಲಿ 100 ಹೆ. ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸುವ ಜವಾಬ್ದಾರಿ ನೀಡಲಾಗಿರುತ್ತದೆ. ಪ್ರಸ್ತುತ ರಾಜ್ಯದ್ಯಾಂತ 566 ಹೋಬಳಿಗಳಲ್ಲಿ ಸದರಿ ಯೋಜನೆಯು ಅನುಷ್ಠಾನದಲ್ಲಿದ್ದು ಒಟ್ಟು 53829 ರೈತರನ್ನು ಒಳಗೊಂಡ ಸಮಾರು 63677 ಹೆ. ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಯೋಜನಾ ಪ್ರದೇಶವನ್ನು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ (KSSOCA) ಯ ವತಿಯಿಂದ ಸಾವಯವ ಗುಂಪು ಪ್ರಮಾಣೀಕರಣಕ್ಕೆ ಒಳಪಡಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ರೂ.4657.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿದೆ.

Organic Millets 2017 Regional Federations

ಸಾವಯವ ಪ್ರಮಾಣೀಕರಣ

ಸಾವಯವ ಉತ್ಪನ್ನಗಳು ಪ್ರಮಾಣಗಳಿಗೆ ಬದ್ಧವಾಗಿ ಉತ್ಪಾದಿಸಲ್ಪಟ್ಟಿವೆ ಎಂಬುದನ್ನು ಪ್ರಮಾಣ ಪತ್ರವು ಖಚಿತಪಡಿಸುತ್ತದೆ. ತಪ್ಪಿತಸ್ಥ ಸ್ಪರ್ಧೆಗಾರಿಂದ ನೈಜ ಸಾವಯವ ರೈತರನ್ನು ಬೇರ್ಪಡಿಸಿ ರಕ್ಷಿಸುತ್ತದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕರಣಗೊಂಡ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಲಭಿಸುತ್ತದೆ.

ಕೇಂದ್ರ ಸರ್ಕಾರದ APEDA ಸಂಸ್ಥೆಯಿಂದ ಮಾನ್ಯತೆ ಪಡೆದ ಪ್ರಮಾಣೀಕರಣ ಸಂಸ್ಥೆಯಿಂದ ರಾಜ್ಯದಲ್ಲಿ ಸಾವಯವ ಕೃಷಿ ಕ್ಷೇತ್ರಗಳ ಗುಂಪು ಪ್ರಮಾಣೀಕರಣ ಕೈಗೊಳ್ಳಲಾಗುತ್ತಿದ್ದು, ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಸಮನ್ವಯದೊಂದಿಗೆ ರಾಜ್ಯದಲ್ಲಿ ಸಾವಯವ ಪ್ರಮಾಣೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾವಯವ ಭಾಗ್ಯ ಯೋಜನೆಯ 63677 ಹೆ. ಪ್ರದೇಶವನ್ನು ಹಾಗೂ 53829 ರೈತರನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಮುಖಾಂತರ ಪ್ರಮಾಣೀಕರಣದ ವ್ಯಾಪ್ತಿಗೆ ತರಲಾಗಿದ್ದು, ಎರಡನೇ ವರ್ಷದ (IC-2) ಪ್ರಮಾಣೀಕರಣ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆ(PKVY):

ಸಾವಯವ ಭಾಗ್ಯಯೋಜನೆಯಲ್ಲದೆ ರಾಜ್ಯದಲ್ಲಿ ಕೇಂದ್ರ ಪುರಸ್ಕøತ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು 2015-16ನೇ ಸಾಲಿನಿಂದ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲುಕುಗಳಲ್ಲಿ 50 ಎಕರೆಗಳ ಕ್ಲಸ್ಟರ್‍ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 27250 ಎಕರೆ ಪ್ರದೇಶದಲ್ಲಿ ಪ್ರತಿ ತಾಲ್ಲೂಕಿಗೆ ಮೂರು ಕ್ಲಸ್ಟರ್‍ಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು 25968 ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

2016-17ನೇ ಸಾಲಿನಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ ರೂ. 2630.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿರುತ್ತದೆ.