ಷರತ್ತುಗಳು ಹಾಗೂ ನಿಬಂಧನೆಗಳು

 • ಪ್ರದರ್ಶನದ ಸ್ಥಳ/ಮಳಿಗೆ ಕಾಯ್ದಿರಿಸಲು ಕೊನೆಯ ದಿನಾಂಕ: 25ನೇ ಮಾರ್ಚ್ 2017
 • ಮಳಿಗೆಗಳು ನೀರು ಸೋರದಿರುವಂತಹ ಛಾವಣಿಯಡಿ ಚೌಕಾಕಾರದಲ್ಲಿರುತ್ತವೆ ಹಾಗೂ ನೆಲ ಹಾಸು ಹೊಂದಿರುತ್ತವೆ. ಪ್ರತಿ ಮಳಿಗೆಗೆ ಒಂದು ಸ್ಪಾಟ್ ಲೈಟ್, ಒಂದು ವಿದ್ಯುತ್ ಸಂಪರ್ಕದ ಪಾಯಿಂಟ್, ಒಂದು ಮೇಜು ಹಾಗೂ ಎರಡು ಖುರ್ಚಿಗಳನ್ನು ನೀಡಲಾಗಿರುತ್ತದೆ.
 • ಮೇಳ ನಡೆಯುವ ಎರಡು ದಿನಗಳ ಮುಂಚಿತವಾಗಿ ಮಳಿಗೆಗಳನ್ನು ಒದಗಿಸಲಾಗುತ್ತದೆ.
 • ಮಳಿಗೆ ಕಾಯ್ದಿರಿಸಲು ಮುಂಗಡವಾಗಿ ಹಣ ಪಾವತಿಸಬೇಕು. ಒಮ್ಮೆ ಪಾವತಿಸಿದ ಹಣವನ್ನು ಯಾವುದೇ ಕಾರಣಕ್ಕಾಗಿಯೂ ಹಿಂದಿರುಗಿಸಲಾಗುವುದಿಲ್ಲ.
 • ಮೇಳ ನಡೆಯುವ ಸಮಯದಲ್ಲಿ ಪ್ರದರ್ಶಿಸಲಾಗಿರುವ ಉತ್ಪನ್ನಗಳು ಹಾಗೂ ಇತರೆ ವಸ್ತುಗಳಿಗೆ ಹಾಗೂ ಮಳಿಗೆ ನಿರ್ವಹಣೆಗೆ ಆಯಾ ಮಳಿಗೆಯ ಪ್ರದರ್ಶಕರೇ ಜವಾಬ್ದಾರರಾಗಿರುತ್ತಾರೆ.
 • ವಿಶೇಷ ಸಂದರ್ಭಗಳಲ್ಲಿ ಸ್ಥಳ/ಮಳಿಗೆಗಳ ಅಳತೆಯನ್ನು ಬದಲಾಯಿಸುವ ಹಾಗೂ ಮರುನಿಯೋಜನೆ ಮಾಡುವ ಹಕ್ಕನ್ನು ಕೃಷಿ ಇಲಾಖೆ ಹೊಂದಿರುತ್ತದೆ.
 • ಮಳಿಗೆ ಪ್ರದರ್ಶಕರು ತಮ್ಮ ಪ್ರದರ್ಶನ ಸ್ಥಳಗಳನ್ನು/ಮಳಿಗೆಗಳನ್ನು ಉದ್ಘಾಟನಾ ಕಾರ್ಯಕ್ರಮ ನಡೆಯುವ ಎರಡು ಗಂಟೆಗಳಿಗೆ ಮುಂಚಿತವಾಗಿ ಸಿದ್ಧಗೊಳಿಸಬೇಕು.
 • ಪ್ರದರ್ಶನ ನಡೆಯುವ ಸ್ಥಳದ ಸುತ್ತಲೂ ವಾಹನಗಳ ಚಲನೆಯನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
 • ತೊಂದರೆ ಅಥವಾ ಕಿರಿಕಿರಿ ಉಂಟು ಮಾಡುವ ಮ್ಯೂಸಿಕ್ ಸಿಸ್ಟಮ್‍ಗಳು ಹಾಗೂ ವಿಶೇಷ ದೀಪಗಳಿಗೆ ಅನುಮತಿಯಿರುವುದಿಲ್ಲ.
 • ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡುವಂತಹ ಉತ್ಪನ್ನಗಳನ್ನು ಜನರು ಓಡಾಡುವ ಸ್ಥಳಕ್ಕೆ ಅಡ್ಡಲಾಗಿ/ ಸಾರ್ವಜನಿಕರಿಗೆ/ ಇತರೆ ಮಳಿಗೆದಾರರಿಗೆ ತೊಂದರೆಯಾಗದಿರುವಂತೆ ಜೋಡಿಸಿಟ್ಟಿರಬೇಕು.
 • ಅನಾರೋಗ್ಯಕರ ಅಥವಾ ಉಸಿರುಗಟ್ಟಿಸುವಂತಹ ಅಥವಾ ಹೊಗೆ ಬರುವಂತಹ ಯಾವುದೇ ಉತ್ಪನ್ನ ಅಥವಾ ಪ್ರಕ್ರಿಯೆಯನ್ನು ನಿರ್ಬಂಧಿಸಲಾಗಿರುತ್ತದೆ. ಪ್ರದರ್ಶನ ನಡೆಯುವ ಸ್ಥಳದ ಆವರಣದ ಒಳಗೆ ಇಂಧನ ಆಥವಾ ಸುಲಭವಾಗಿ ಬೆಂಕಿ ತಾಕಬಲ್ಲಂತಹ ವಸ್ತುಗಳನ್ನು ಇಡುವಂತಿಲ್ಲ. ಅಂತಹ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯೋಜಕರು ಜವಾಬ್ದಾರರಾಗಿರುವುದಿಲ್ಲ.
 • ನಿಗದಿಪಡಿಸಿರುವ ಸ್ಥಳವಲ್ಲದೆ ಪ್ರದರ್ಶನ ನಡೆಯುವ ಸ್ಥಳದ ಬೇರೆ ಯಾವುದೇ ಸ್ಥಳದಲ್ಲಿಯೂ ಪೋಸ್ಟರ್‍ಗಳು ಹಾಗೂ ಬ್ಯಾನರ್‍ಗಳನ್ನು ಪ್ರದರ್ಶಿಸುವಂತಿಲ್ಲ.
 • ಅನಿರೀಕ್ಷಿತ ಸನ್ನಿವೇಶಗಳು ಎದುರಾದಲ್ಲಿ ಪ್ರದರ್ಶನ/ಮೇಳವನ್ನು ರದ್ದುಪಡಿಸುವ ಹಕ್ಕನ್ನು ಕೃಷಿ ಇಲಾಖೆ ಹೊಂದಿರುತ್ತದೆ.
 • ಸಾಮಾನ್ಯ ಭದ್ರತಾ ವ್ಯವಸ್ಥೆ ಒದಗಿಸಿದ್ದರೂ ಸಹ, ತಮ್ಮ ಮಳಿಗೆ ಮತ್ತು ಪ್ರದರ್ಶನ ಸಾಮಗ್ರಿ ಮತ್ತು ವಸ್ತುಗಳಿಗೆ ಆಯಾ ಮಳಿಗೆಗಳ ಪ್ರದರ್ಶಕರೇ ಜವಾಬ್ದಾರರಾಗಿರುತ್ತಾರೆ.